ಟಾಟಾ ಕಂಪನಿಯ ಮೇಲೆ ಸೈಬರ್ ದಾಳಿ!!!- ಏನಾಯ್ತು? ಹೇಗಾಯ್ತು? ಬನ್ನಿ ತಿಳಿದುಕೊಳ್ಳೂಣ.
ಇತ್ತೀಚೆಗೆ, ಟಾಟಾ ಸಮೂಹದ ಎರಡು ದೊಡ್ಡ ಕಂಪನಿಗಳಾದ ಜಾಗ್ವಾರ್ ಲ್ಯಾಂಡ್ ರೋವರ್ (ಜೆ.ಎಲ್.ಆರ್) ಮತ್ತು ಟಾಟಾ ಟೆಕ್ನಾಲಜೀಸ್ ಸೈಬರ್ ದಾಳಿಗೆ ಗುರಿಯಾಗಿದ್ದವು. ಈ ಘಟನೆಯು ದೊಡ್ಡ ಸುದ್ದಿ ಮಾಡಿತು ಮತ್ತು ಸೈಬರ್ ಸುರಕ್ಷತೆ(Cyber security) ಎಷ್ಟು ಮುಖ್ಯ ಎಂಬುದನ್ನು ಮತ್ತೊಮ್ಮೆ ನಮಗೆ ನೆನಪಿಸಿತು.
ದಾಳಿ ಹೇಗೆ ನಡೆಯಿತು?: ಹ್ಯಾಕರ್‌ಗಳು ಕಂಪನಿಯ ಆಂತರಿಕ ಸರ್ವರ್‌ಗಳು ಮತ್ತು ನೆಟ್‌ವರ್ಕ್ ಸಿಸ್ಟಮ್‌ಗಳನ್ನು ಭೇದಿಸಿದ್ದಾರೆ.ಇದನ್ನು ಮಾಡಲು ಅವರು ಫಿಶಿಂಗ್ ಇಮೇಲ್‌ಗಳು (ನಕಲಿ ಇಮೇಲ್‌ಗಳ ಮೂಲಕ ವಂಚನೆ) ಮತ್ತು ransomware (ಡೇಟಾ ಲಾಕ್ ಮಾಡುವುದು ಮತ್ತು ಹಣಕ್ಕಾಗಿ ಬೇಡಿಕೆಯಿಡುವುದು) ಬಳಸಿದ್ದಾರೆ ಎಂದು ವರದಿಯಾಗಿದೆ.ಕಂಪ್ಯೂಟರ್‌ಗಳು ಹಾನಿಗೊಳಗಾದ ಕಾರಣ ಜೆ.ಎಲ್.ಆರ್ ಕಾರ್ಖಾನೆಗಳಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಯಿತು.
ಟಾಟಾ ಟೆಕ್ನಾಲಜೀಸ್‌ನಲ್ಲಿ ಸುಮಾರು ೧.೪ ಟಿಬಿ ಡೇಟಾ (ಪ್ರಾಜೆಕ್ಟ್ ಡಾಕ್ಯುಮೆಂಟ್‌ಗಳು, ಬ್ಲೂಪ್ರಿಂಟ್‌ಗಳು, ಇಮೇಲ್‌ಗಳು ಸೇರಿದಂತೆ) ಕಳವು ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಪರಿಣಾಮ ಏನಾಗಿತ್ತು?
ಉತ್ಪಾದನೆಗೆ ಹೊಡೆತ: ಜೆಎಲ್‌ಆರ್ ಕಾರ್ಖಾನೆಗಳಲ್ಲಿ ಉತ್ಪಾದನೆಯನ್ನು ಕೆಲವು ದಿನಗಳವರೆಗೆ ಸ್ಥಗಿತಗೊಳಿಸಲಾಗಿದೆ.ತಿತಿ
ಡೇಟಾಗೆ ಹೊಡೆತ : ಕಂಪನಿಯ ಗೌಪ್ಯ ಮಾಹಿತಿಯನ್ನು ಲೀಕ್ ಮಾಡುವ ಭಯ ಕಾಡುತ್ತಿದೆ.
ಬ್ರಾಂಡ್ ಇಮೇಜ್: ಇಂತಹ ದಾಳಿಯು ಹೂಡಿಕೆದಾರ ಮತ್ತು ಗ್ರಾಹಕರ ವಿಶ್ವಾಸವನ್ನು ಹಾನಿಗೊಳಿಸುತ್ತದೆ.
ಕಂಪನಿಯ ಪ್ರತಿಕ್ರಿಯೆ: ಗ್ರಾಹಕರ ವೈಯಕ್ತಿಕ ಮಾಹಿತಿ ಸುರಕ್ಷಿತವಾಗಿದೆ ಎಂದು ಟಾಟಾ ಹೇಳಿದೆ.
ತಾತ್ಕಾಲಿಕ ಅಡಚಣೆಯ ಹೊರತಾಗಿಯೂ ಸೇವೆಗಳು ಕ್ರಮೇಣ ಚೇತರಿಸಿಕೊಳ್ಳುತ್ತಿವೆ ಎಂದು ಟಾಟಾ ಭರವಸೆ ನೀಡಿದೆ. ಸೈಬರ್ ಸೆಕ್ಯುರಿಟಿ ತಜ್ಞರನ್ನು ವಿಚಾರಣೆಗೆ ಕರೆಯಲಾಗಿದೆ.
ಇಂತಹ ಬೇಳವಣಿಗೆಗಳಿಂದ ನಾವೇನು ಕಲಿಯಬೇಕು ?
ಟಾಟಾ ಘಟನೆ ನಮಗೆ ಏನು ತೋರಿಸಿದೆ - “ಡಿಜಿಟಲ್ ಯುಗದಲ್ಲಿ, ಭದ್ರತೆಯು ಕೇವಲ ಬಾಗಿಲಿಗೆ ಬೀಗ ಹಾಕುವುದಷ್ಟೇ ಅಲ್ಲ , ಸೈಬರ್ ರಕ್ಷಾಕವಚವು ಅಷ್ಟೇ ಮುಖ್ಯವಾಗಿದೆ!”

讨论 Discussion Pipe Matrix
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ